Home
-
ಶೃಂಗೇರಿ ಪಟ್ಟಣ ಪಂಚಾಯ್ತಿಯು 1996ರಲ್ಲಿ ಸ್ಥಾಪನೆಯಾಯಿತು.
- ಶೃಂಗೇರಿ ಪಟ್ಟಣ ಪಂಚಾಯ್ತಿಯು ಚಿಕ್ಕಮಗಳೂರಿನಿಂದ ಸುಮಾರು 98 ಕೀಲೋಮೀಟರ್ ದೂರದಲ್ಲಿರುತ್ತದೆ
- 2001 ರ ಜನಗಣತಿಯ ಪ್ರಕಾರ ಶೃಂಗೇರಿ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿ 4253 ಜನಸಂಖ್ಯೆಯನ್ನು ಹೊಂದಿರುತ್ತದೆ
- ಶೃಂಗೇರಿ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿದ್ದು, 11 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
- ಶೃಂಗೇರಿ ಪಟ್ಟಣ ಪಂಚಾಯಿತಿಯು ಒಟ್ಟು 1.8 ಚದರಕಿ.ಮೀಟರ್ ಗಳಿರುತ್ತದೆ.
- ಜಗದ್ಗುರು ಶ್ರೀ ಆದಿಶಂಕರ ಭಗವತ್ಪಾದರು 12ನೇ ಶತಮಾನದಲ್ಲಿ ಸ್ಥಾಪಿಸಿದ 4ದಕ್ಷಿಣಾಮ್ನಾಯ ಪೀಠಗಳಲ್ಲಿ ಶೃಂಗೇರಿ ಪೀಠವು ಪ್ರಮುಖವಾಗಿದೆ, ಪ್ರಸಿದ್ಧವಾಗಿದೆ.
Brief Introduction of Sringeri TP:-
- The Town Panchayath (TP) Sringeri was Constituted in 1996.
- It has the distance of 98 Kms from Chikmagalur.
- It Has Population of 4253 as per census 2001.
- The TP has 11 Wards and equal number of councilors and 3 Numbers of Nominee Councilors.
- Sringeri TP Stretches to an area of 1.8 Sqkm.
- Jagadguru Sri Adi Shankara Bhagavatpada established the first of the four Amnaya Peethams at Sringeri more than twelve centuries ago to foster the sacred tradition of Sanatana Dharma.
_______________________________________________________________________________________________________________
1). ಶೃಂಗೇರಿ ಪಟ್ಟಣ ಪಂಚಾಯ್ತಿ ಕಛೇರಿಯಲ್ಲಿ 'ಸಾರ್ವಜನಿಕ ದೂರು ನಿವಾರಣಾ ಘಟಕ' ತೆರೆಯಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು 08265-251212 ಗೆ ಕರೆ ಮಾಡಿ ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ...
For 12 Hours Helpline service please dial 08265-251212.
********
2).ಗಣಕೀಕರಣ: ಶೃಂಗೇರಿ ಪಟ್ಟಣ ಪಂಚಾಯತಿಯು 1990 ರಿಂದ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ಜನನ - ಮರಣ ನೊಂದಾಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.
COMPUTARIZATION: We are very happy to intimate the citizens of Sringeri Town that we have computerizes the Birth and Death certificates from 1990 under state Government KMRP computerization scheme, from now onwards citizens are requested to visit the office for registration and getting of Birth and Death certificates by paying service fee. Citizens are requested to make use of this facility.
*********
ಘನತ್ಯಾಜ್ಯ ವಸ್ತು ನಿರ್ವಹಣೆ: ಶೃಂಗೇರಿ ಪಟ್ಟಣ ಪಂಚಾಯಿತಿಯು 11ವಾರ್ಡ್‌ಗಳಿಂದ ಕೂಡಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರು ಮತ್ತು ಹೊರ ಗುತ್ತಿಗೆ ಸಿಬ್ಬಂದಿಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಬೀದಿಗುಡಿಸುವುದು, ಕಸ ಸಾಗಾಣಿಕೆ ಮತ್ತು ಮೆನೆ ಮೆನೆ ಕಸ ಸಂಗ್ರಹಣೆ ಮತ್ತು ವಿಂಗಡಣೆ ಮುಖ್ಯ ಕಾರ್ಯಗಳಾಗಿದ್ದು, ಸಾರ್ವಜನಿಕರು ಮನೆ ಮನೆಯ ಕಸ ಸಂಗ್ರಹಣೆಯ ಕೆಲಸವನ್ನು ಪ್ರೋತ್ಸಾಹಿಸಿ ಪಟ್ಟಣದ ನೈರ್ಮಲ್ಯವನ್ನು ಕಾಪಾಡಲು ಸಹಕರಿಸುವುದು.ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು.
This Page is maintained by " N. Chandrashekara , Chief Officer"
Last updated 31/01/2012

